ಹೈದರಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ‌ಭಾರತ ಕೊನೆಯ ಓವರ್ ನಲ್ಲಿ‌ ಗೆಲುವು ಸಾಧಿಸಿದೆ. ಗೆಲುವಿನ ಸಂಭ್ರಮದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಐಸಿಸಿ ಶಾಕ್ ನೀಡಿದೆ.

ನಿಧಾನಗತಿಯ ಓವರ್ ರೇಟ್ ನಿಂದ ನಾಯಕ ರೋಹಿತ್ ಶರ್ಮಾ ಅವರ ಪಂದ್ಯ ಶುಲ್ಕದ ಶೇ 60 ಹಾಗೂ ಉಳಿದ ಆಟಗಾರರ ಶೇ 20 ರಷ್ಟು ಮೊತ್ತವನ್ನು ಕಡಿತಗೊಳಿಸಿದೆ. ಐಸಿಸಿ ಕೋಡ್ ನ ಆರ್ಟಿಕಲ್ 2.22 ರ ಪ್ರಕಾರ ಕಡಿತಗೊಳಿಸಿದೆ.

ಹೈದರಾಬಾದ್​ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ನಿಗದಿತ ಸಮಯದಲ್ಲಿ ಓವರ್ ಮುಗಿಸಲಿಲ್ಲ. ಈ ಕಾರಣ ಈ ದಂಡ ಹಾಕಲಾಗಿದೆ. ನಿಗದಿತ ಸಮಯಕದಲ್ಲಿ 3 ಓವರ್ ಕಡಿಮೆ ಬೌಲಿಂಗ್ ಮಾಡಿದ್ದಾರೆ. ದ್ವಿತೀಯ ಏಕದಿನ ಪಂದ್ಯ ಜನವರಿ 21 ರಂದು ರಾಯಪುರ್ ದಲ್ಲಿ ನಡೆಯಲಿದೆ.

ಇದನ್ನೂ ಓದಿhttps://emadhyama.com/?s=%E0%B2%95%E0%B3%8D%E0%B2%B0%E0%B2%BF%E0%B2%95%E0%B3%86%E0%B2%9F%E0%B3%8D+