ಭುವನೇಶ್ವರ: ಹಾಕಿ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ವೆಲ್ಸ್ ವಿರುದ್ಧ ಭಾರತ 4-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.

ಭಾರತ ಡಿ ಗ್ರೂಪ್ ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇಂಗ್ಲೆಂಡ್ ಪ್ರಥಮ ಸ್ಥಾನ ಹೊಂದಿದೆ.

ಭಾರತ ಕ್ವಾರ್ಟರ್ ಫೈನಲ್ ನಲ್ಲಿ ಅರ್ಹತೆ ಗಿಟ್ಟಿಸಲು ರವಿವಾರ ನ್ಯೂಜಿಲ್ಯಾಂಡ್ ವಿರುದ್ಧ ಕ್ರಾಸ್ ಓವರ್ ಪಂದ್ಯ ಆಡಬೇಕಾಗಿದೆ.

ಭಾರತ ಈ ಪಂದ್ಯದಲ್ಲಿ 8 ಗೋಲು ಗಳಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯುತಿತ್ತು. ಇಂಗ್ಲೆಂಡ್ ಹಾಗೂ ಭಾರತ ತಂಡ ಸಮವಾಗಿ 7 ಅಂಕಗಳನ್ನು ಹೊಂದಿವೆ. ಭಾರತಕ್ಕಿಂತ ಇಂಗ್ಲೆಂಡ್ ಹೆಚ್ಚು ಗೋಲು ಗಳಿಸಿದೆ.