ಮಂಡ್ಯ: ಶ್ರೀರಾಮ ಸೀತೆಗೆ ಹೆಂಡ ಕುಡಿಸುತ್ತಿದ್ದ ಎನ್ನುವ ಮೂಲಕ ಪ್ರೊ. ಕೆ.ಎಸ್.‌ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮ 14 ವರ್ಷ ಕಾಡಿನಲ್ಲಿದ್ದ, ವಾಪಸ್ ಬಂದು 11 ವರ್ಷ ರಾಜ್ಯಭಾರ ಮಾಡಿದ. ರಾಮ ಆಡಳಿತ ನಡೆಸದೆ ಪುರೋಹಿತರ ಜೊತೆ ಕಥೆ ಹೇಳಿಕೊಂಡು ಕಾಲ‌ಹರಣ ಮಾಡುತ್ತಿದ್ದ.

ಮಧ್ಯಾಹ್ನದ ನಂತರ ಸೀತೆಗೆ ಹೆಂಡ ಕುಡಿಸಿ, ತಾನು ಕುಡಿಯುತ್ತಿದ್ದ, ಅದಕ್ಕೆ ಪುರಾವೆಗಳಿವೆ. ಇವೆಲ್ಲ ವಾಲ್ಮೀಕಿ ರಾಮಾಯಣ ಹಾಗೂ ಉತ್ತರಕಾಂಡದಲ್ಲಿರುವ ಮಾತುಗಳು ಎಂದು ಭಗವಾನ್ ಹೇಳಿದರು.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದರು.

ರಾಮ ರಾಜ್ಯಕ್ಕೆ ಯಾವುದೇ ಅರ್ಥವಿಲ್ಲ. ಮಹಾತ್ಮ ಗಾಂಧಿ ಅವರ ಕಾರಣದಿಂದ ರಾಮ ರಾಜ್ಯದ ಮಾತು ಹರಡುತ್ತಿದೆ. ರಾಮ, ತನ್ನ ಆಡಳಿತದ ಸಮಯದಲ್ಲಿ ಪುರೋಹಿತರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅಲ್ಲದೆ ಲಕ್ಷ್ಮಣನನ್ನು ಆತ ಗಡಿಪಾರು ಮಾಡಿದ್ದ. ಸೀತೆಯನ್ನು ಕಾಡಿಗೆ ಕಳುಹಿಸಿದ್ದ ಎಂದರು.