ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (RPC ಮತ್ತು KK) ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (PST) ಹಾಗೂ ಸಹಿಷ್ಣುತಾ ಪರೀಕ್ಷೆ (ET) ವೇಳಾಪಟ್ಟಿ ಪ್ರಕಟವಾಗಿದೆ. ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಹತೆ ಪಡೆದಿರುವ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಈ ಪೈಕಿ ಉಳಿಕೆ ಮೂಲ ವೃಂದ (RPC)ದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಸೆ.28ರಿಂದ ವಿವಿಧ ಜಿಲ್ಲೆಗಳಲ್ಲಿ ದೈಹಿಕ ಪರೀಕ್ಷೆ
ಬೆಂಗಳೂರು ನಗರ ಘಟಕ
ಬೆಂಗಳೂರು ನಗರ ಘಟಕದ 2,015 ಹುದ್ದೆಗಳಿಗೆ 9,887 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ಸೆ.28ರಿಂದ ಅ.5, 2026ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳು:
- ಸಿಎಆರ್ (ಹೆಚ್‌ಕ್ಯೂ), ಚಾಮರಾಜಪೇಟೆ ಸಿರ್ಸಿ ಸರ್ಕಲ್ ಮೈದಾನ
- ಸಿಎಆರ್ (ದಕ್ಷಿಣ), ಆಡುಗೋಡಿ ಮೈದಾನ
- ಸಿಎಆರ್ (ಉತ್ತರ), ಆರ್.ಕೆ. ಹೆಗಡೆ ನಗರ, ತನಿಷಂದ್ರ ಮುಖ್ಯ ರಸ್ತೆ
ಕೇಂದ್ರ ವಲಯ
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳ 200 ಹುದ್ದೆಗಳಿಗೆ 946 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ದಿನಾಂಕ: ಸೆ.28ರಿಂದ ಅ.3, 2026
ಸ್ಥಳ: 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ, ಕೊರಮಂಗಲ, ಮಡಿವಾಳ ಮಾರುಕಟ್ಟೆ ಎದುರು, ಬೆಂಗಳೂರು.
ದಕ್ಷಿಣ ವಲಯ
ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಘಟಕಗಳ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ.
ದಿನಾಂಕ: ಸೆ.28ರಿಂದ ಅ.5, 2026
ಸ್ಥಳ: ಸಿಟಿ ಆರ್ಮ್ಸ್ ರಿಸರ್ವ್ (CAR) ಪರೇಡ್ ಮೈದಾನ, ಮೈಸೂರು ರೇಸ್ ಕೋರ್ಸ್ ಹಿಂಭಾಗ.
ಪೂರ್ವ ವಲಯ
ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ದಿನಾಂಕ: ಸೆ.29ರಿಂದ ಅ.6, 2026
ಸ್ಥಳ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನ, ನವಿಲೆ, ಶಿವಮೊಗ್ಗ.
ಪಶ್ಚಿಮ ವಲಯ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಹಾಗೂ ಮಂಗಳೂರು ನಗರ ಘಟಕಗಳ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ದಿನಾಂಕ: ಸೆ.28ರಿಂದ ಅ.3, 2026
ಸ್ಥಳ: ಮಂಗಳ ಕ್ರೀಡಾಂಗಣ, ಲಾಲ್‌ಬಾಗ್, ಮಂಗಳೂರು.
ಉತ್ತರ ವಲಯ
ಗದಗ್ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕಗಳ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ದಿನಾಂಕ: ಸೆ.29 ಮತ್ತು 30, 2026
ಸ್ಥಳ: 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ, ಮಚ್ಚೆ, ಬೆಳಗಾವಿ (ವಿಟಿಯು ಸಮೀಪ).
ಬಳ್ಳಾರಿ ವಲಯ – RPC
ಬಳ್ಳಾರಿ ಹಾಗೂ ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ದಿನಾಂಕ: ಅ.5ರಿಂದ ಅ.6, 2026
ಸ್ಥಳ: ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನ, ಹೊಸಹಳ್ಳಿ, ಮುನಿರಾಬಾದ್, ಕೊಪ್ಪಳ.
ಕಲ್ಯಾಣ ಕರ್ನಾಟಕ (KK) ವೃಂದದ ಪರೀಕ್ಷಾ ವೇಳಾಪಟ್ಟಿ
ಬೆಂಗಳೂರು ನಗರ – KK
171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ದಿನಾಂಕ: ಅ.8, 2026
ಸ್ಥಳ: ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್‌ಕ್ಯೂ) ಮತ್ತು ಆಡುಗೋಡಿಯ ಸಿಎಆರ್ ಪರೇಡ್ ಮೈದಾನ (ದಕ್ಷಿಣ).
ಬಳ್ಳಾರಿ ವಲಯ – KK
ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ದಿನಾಂಕ: ಅ.12ರಿಂದ ಅ.15, 2026
ಸ್ಥಳ: ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನ, ಹೊಸಹಳ್ಳಿ, ಮುನಿರಾಬಾದ್, ಕೊಪ್ಪಳ.
ಈಶಾನ್ಯ ವಲಯ
ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ದಿನಾಂಕ: ಅ.12ರಿಂದ ಅ.14, 2026
ಸ್ಥಳ: 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ, ತಾಜ್ ಸುಲ್ತಾನ್‌ಪುರ, ಕಲಬುರಗಿ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ಕಾಲ್ ಲೆಟರ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅಭ್ಯರ್ಥಿಗಳು ಕರೆ ಪತ್ರದಲ್ಲಿ ನಮೂದಿಸಿರುವ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪೊಲೀಸ್ ನೇಮಕಾತಿ ವಿಭಾಗ ಸೂಚಿಸಿದೆ.