ನವದೆಹಲಿ: ಹರ್ಯಾಣ ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದಿದೆ. ಆರೋಪದ ಹಿನ್ನಲೆಯಲ್ಲಿ ಮಾಜಿ ಹಾಕಿ ಆಟಗಾರ ಹಾಗೂ ಕ್ರೀಡಾ ಸಚಿವ ಸಂದೀಪ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜ್ಯೂನಿಯರ್ ಅಥ್ಲೆಟಿಕ್ ಕೋಚ್ ಗೆ ಲೈಂಗಿಕ ಕಿರುಕಳ ನೀಡಿರುವ ಆರೋಪ ಕೇಳಿ ಬಂದಿದೆ. ಮಹಿಳಾ ಕೋಚ್ ಚಂದಿಘಡ್ ಎಸ್ ಪಿಗೆ ದೂರು ಸಲ್ಲಿಸಿದರು.
ಯುವತಿಯೂ ಸಚಿವರಿಗೆ ಮೊದಲು ಜಿಮ್ ನಲ್ಲಿ ಭೇಟಿ ಆಗಿದ್ದಾರೆ. ಆನಂತರ ಜಾಲತಾಣದಲ್ಲಿ ಸಂಪರ್ಕ ಮಾಡಲಾಗಿದೆ.
ಯುವತಿಯ ದಾಖಲಾತಿಗಳು ಕಾಣೆಯಾದ ಹಿನ್ನಲೆಯಲ್ಲಿ ಸಚಿವರ ಕಛೇರಿಯಲ್ಲಿ ಭೇಟಿ ನೀಡಿದಾಗ, ಲೈಂಗಿಕ ಕಿರುಕಳ ನೀಡಿದರು ಎಂದು ಯುವತಿ ಆರೋಪಿಸಿದ್ದಾಳೆ.
ಸಿಎಂ ಮನೋಹರ್ ಲಾಲ್ ಖಟ್ಟರ್ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ನನ್ನ ಘನತೆಗೆ ದಕ್ಕೆ ತರುವ ಕಾರ್ಯ ನಡೆದಿದ್ದು, ಖಾತೆಯನ್ನು ಸಿಎಂಗೆ ಹಸ್ತಾಂತರ ಮಾಡುತ್ತೇನೆ ಎಂದು ಹೇಳಿದ್ದಾರೆ.