ಬೆಂಗಳೂರು: ಚಂದನವನದ ಹಾಸ್ಯ ನಟ ಮಂದೀಪ್ ರಾಯ್(73) ನಿಧನರಾದರು. ಬೆಂಗಳೂರಿನ‌ ಭೈರಸಂದ್ರ ನಿವಾಸದಲ್ಲಿ ಶನಿವಾರ ತಡರಾತ್ರಿ ಹೃದಯಾಘಾತದಿಂದ ವಿಧಿವಶರಾದರು.

ರವಿವಾರ ಸಂಜೆ ಮಂದೀಪ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಂದೀಪ್ ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಚಂದನವನಕ್ಕೆ ಎಂಟ್ರಿ ಕೊಟ್ಟು ಮಿಂಚಿನ ಓಟ, ಬೆಂಕಿಯ ಬಲೆ, ಏಳು ಸುತ್ತಿನ ಕೋಟೆ, ಆಸಕಸ್ಮಿಕ, ರೇ, ಆಪ್ತ ರಕ್ಷಕ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.