ರಾಮನಗರ; ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ದುರ್ಬಳಕೆ ಮಾಡಿರುವ ಘಟನೆ ವರದಿಯಾಗಿದೆ.

ಪವಿತ್ರಾ ಎಂಬ ಮಹಿಳೆಯೊಬ್ಬರು “ನಾನು ಡಿ.ಕೆ.ಸುರೇಶ್ ಪತ್ನಿ” ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ವೀಡಿಯೊ ಹರಿಬಿಟ್ಟಿದ್ದಾರೆ. “ಪವಿತ್ರಾ ಡಿ.ಕೆ.ಸುರೇಶ್ ದೊಡ್ಡಾಲಹಳ್ಳಿ” ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಈ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

ಈ ಸಂಬಂಧ ರಾಮನಗರ cen ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಕೀಲ ಪ್ರದೀಪ್ ಅವರು ದೂರು ನೀಡಿದ್ದಾರೆ.