ಬೆಂಗಳೂರು: ಕಾಗಿನೆಲೆ ಪೀಠದ ಶ್ರೀಗಳಿಂದ ಸಿಎಂ ಬಸವರಾಜ್ ಬೊಮ್ಮಾಯಿ ಮೈಕ್ ಕಿತ್ತುಕೊಂಡ ಘಟನೆ ಬೆಂಗಳೂರಿನ ಗರುಡಾಚಾರ್ಯ ಪಾಳ್ಯದಲ್ಲಿ ನಡೆದಿದೆ.

ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಶ್ರೀ ಭಾಗವಹಿಸಿದ್ದರು. ಶ್ರೀಗಳು ಮಾತನಾಡುವ ವೇಳೆ, ಬೆಂಗಳೂರಿನಲ್ಲಿ ಪ್ರವಾಹ ಆಗಿರುವುದನ್ನು ನೋಡಿದ್ದೀವಿ. ಮುಖ್ಯಮಂತ್ರಿಗಳು ಭರವಸೆ ನೀಡದೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಆ ಸಮಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಶ್ರೀಗಳಿಂದ ಮೈಕ್ ಕಿತ್ತುಕೊಂಡು, ನಾನು ಆಶ್ವಾಸನೆ ನೀಡುವ ‌ಸಿಎಂ ಅಲ್ಲ. ಈಗಾಗಲೇ ಪರಿಹಾರ ಬಿಡುಗಡೆ ಮಾಡಿದ್ದೆನೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಶ್ರೀಗಳು ಮಾತನಾಡಿದ ನಂತರವೂ ಸಿಎಂ ತಮ್ಮ ಮಾತುಗಳನ್ನು ಆಡಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.