ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು, ಸಿದ್ದರಾಮಯ್ಯಗೆ 500 ಕೋಟಿ ರೂ. ಸುಪಾರಿ ನೀಡಲಾಗಿದೆ ಎಂದು ಸಚಿವ ಆರ್ ಅಶೋಕ್ ಆರೋಪಿಸಿದರು.
ಕಾಂಗ್ರೆಸ್ ನಲ್ಲಿ ಡಿ ಕಾಂಗ್ರೆಸ್ ಹಾಗೂ ಎಸ್ ಕಾಂಗ್ರೆಸ್ ಎಂಬ ಎರಡು ಬಣಗಳಿವೆ. ಡಿ ಕಾಂಗ್ರೆಸ್ ಸೋಲಿಸಲು ಎಸ್ ಕಾಂಗ್ರೆಸ್ ಗೆ 500 ಕೋಟಿ ರೂ. ಸುಪಾರಿ ನೀಡಲಾಗಿದೆ. ಕಾಂಗ್ರೆಸ್ ನಲ್ಲಿ ಡಿ ಕಾಂಗ್ರೆಸ್ VS ಎಸ್ ಕಾಂಗ್ರೆಸ್ ಆಗಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂದರು.
ಇವರಿಬ್ಬರೂ ಇಲ್ಲದಿದ್ದರೂ ಬಿಜೆಪಿಗೆ ಲಾಭವಾಗಲಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಹವಾ ಜೋರಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಮೋದಿ ರಾಜ್ಯಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.