ಬಾಗಲಕೋಟೆ: ನಾ ನಾಯಕಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಿರೂಪಕಿಯನ್ನು ನೋಡಿದ ವಿಡಿಯೋ ವೈರಲ್ ಮಾಡಿದ್ದಾರೆ. ಹೊಟ್ಟೆ ಕಿಚ್ಚಿಗೆ ಯಾವುದೇ ಮದ್ದಿಲ್ಲ. ಹೊಟ್ಟೆ ಕಿಚ್ಚಿನಿಂದ ಟ್ರೋಲ್ ‌ಮಾಡುತ್ತಿದ್ದಾರೆ ಎಂದು ಬಾಗಲಕೋಟೆ ಮಹಿಳಾ ಘಟಕದ ಅಧ್ಯಕ್ಷ ರಕ್ಷಿತಾ ಈಟಿ ಟೀಕಿಸಿದರು.

ಕಾರ್ಯಕ್ರಮ ನಿರೂಪಕಿ ಲಾವಣ್ಯಾ ಬಲ್ಲಾಳ ಅವರನ್ನು ನಿರೂಪಣೆ ಮಾಡುವಾಗ ಸಿದ್ದರಾಮಯ್ಯ ಯಾರಂತ ನೋಡಿದರು. ಆಮೇಲೆ ಇವರಾ ಅಂತ ಕೈ ಮಾಡಿ ಹೋದರು.

ಕೆಲವರು ಹೊಟ್ಟೆ ಕಿಚ್ಚಿನಿಂದ ವಿಡಿಯೋವನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ನಾನು ಸ್ಥಳದಲ್ಲೇ ಇದ್ದು, ಸಿದ್ದರಾಮಯ್ಯ ಎಲ್ಲಾ ಮಹಿಳಾ ನಾಯಕಿಯರನ್ನು ಮಾತಾಡಿಸಿ ನಮಸ್ಕಾರ ಹೇಳಿ ಹೋಗುತ್ತಿದ್ದರು ಎಂದರು.

ಸಿದ್ದರಾಮಯ್ಯ ಕಾರ್ಯಕ್ರಮದ ನಿರೂಪಣೆ ಮಾಡುವರು ಯಾರು ಎಂದು ನೋಡಿದ್ದಾರೆ ಅಷ್ಟೇ, ಅದನ್ನ ಟ್ರೋಲ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.