ಬೆನೋನಿ: ಅಂಡರ್ 19 ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಚೊಚ್ಚಲ ಆವೃತ್ತಿಯ, ಚೊಚ್ಚಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಸಿತು. ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಕಲೆ ಹಾಕಿದೆ.
ಗುರಿ ಬೆನ್ನಟ್ಟಿದ ಭಾರತ ತಂಡದ ಶ್ವೇತಾ ಶೇರಾವತ್(92) ಅವರ ಅರ್ಧಶತಕದ ನೆರವಿನಿಂದ 16.3 ಓವರ್ ಗಳಲ್ಲಿ 170 ರನ್ ಗಳಿಸುವ ಮೂಲಕ ಗೆಲುವಿನ ಮಂದಹಾಸ ಬೀರಿದೆ.
ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿದೆ. ಭಾರತ ಸೇರಿ 16 ತಂಡಗಳ ಈ ಆವೃತ್ತಿಯಲ್ಲಿ ಭಾಗಿಯಾಗಿವೆ.