ಬೆಂಗಳೂರು: ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕನ್ನಡ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ರೂಪೇಶ್ ಕೈ ಮೇಲಕ್ಕೆ ಎತ್ತುವ ಮೂಲಕ ವಿನ್ನರ್ ಆಗಿದ್ದಾರೆ.

ನಟ ರಾಕೇಶ್ ಅಡಿಗ ರನ್ನರ್ ಆಫ್ ಗೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸೀಸನ್ 9 ರಲ್ಲಿ ರೂಪೇಶ್ ರಾಜಣ್ಣ ಮೂರನೇ ಸ್ಥಾನ ಪಡೆದರು. ಕಿರುತೆರೆ ನಟಿ ದೀಪಿಕಾ ದಾಸ್ ನಾಲ್ಕನೇ ಸ್ಥಾನ ಪಡೆದರು.

ಈ ಬಾರಿ ವಿನ್ನರ್ ಗೆ 60 ಲಕ್ಷ ರೂ ದೊರೆಯಲಿದೆ. ಹಿಂದಿನ ಸೀಸನ್ ಗಳ ವಿಜೇತರಿಗೆ 50 ಲಕ್ಷ ರೂ. ನೀಡುತ್ತಿದ್ದರು.