ರಾಮನಗರ: ಜಿಲ್ಲೆಯಲ್ಲಿ ಒಂಟಿ ಕಾಡಾನೆ ಪುಂಡಾಟ ಮತ್ತೆ ಮುಂದುವರಿದಿದೆ.
ತಾಲೂಕಿನ ಕೈಲಾಂಚ ಹೋಬಳಿಯ ಹೊಸ ದೊಡ್ಡಿ ಗ್ರಾಮದಲ್ಲಿ ಒಂಟಿ ಸಲಗ ದಾಂಧಲೆ ನಡೆಸಿದೆ. ತೆಂಗಿನ ತೋಟದ ಮೇಲೆ ದಾಳಿ ನಡೆಸಿದ ಆನೆ, ತೆಂಗಿನ ಮರಗಳ ನಾಶ ಮಾಡಿದೆ.
ಹೊಸದೊಡ್ಡಿ ಗ್ರಾಮದ ಜಗದೀಶ್, ಪಾರ್ವತಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾಡಾನೆ ಪುಂಡಾಟ ನಡೆಸಿದೆ.
ತೆಂಗಿನ ಮರಗಳನ್ನು ಕಿತ್ತುಹಾಕಿ, ಇನ್ನಿತರ ಬೆಳೆಗಳನ್ನು ತುಳಿದು ಹಾನಿ ಮಾಡಿದೆ.
ಪದೇ ಪದೇ ಕಾಡಾನೆ ದಾಳಿ ಮಾಡುತ್ತಿರುವುದರಿಂದ ಬೇಸತ್ತ ರೈತರು, ಕಾಡಾನೆ ಉಪಟಳ ನಿಯಂತ್ರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.