ಬೆಳಗಾವಿ: ಗುಟಕಾ‌ ಜಗಿದು ಉಗುಳಿದ ವಿಚಾರಕ್ಕೆ ಓರ್ವನ ಕೊಲೆ ಆಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಕೊಲೆ ನಡೆದಿದೆ‌.

ಗುಟಕಾ‌ ಜಗಿದು ಉಗಳಿದ ಪರಿಣಾಮ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ಜಗಳ ತಾರಕ್ಕಕೇರಿ ಅಜಯ್‌ ಹಿರೇಮಠ ಎಂಬಾತ ಮಂಜುನಾಥ್‌ ಸುಣಗಾರ ಅನ್ನುವ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ.

ಅವರಿಬ್ಬರು ಕುಡಿದ‌ ಮತ್ತಿನಲ್ಲಿ ಪಾನ್ ಶಾಪ್ ಬಳಿ ಬಂದಿದ್ದಾರೆ. ಗುಟಕಾ ಉಗಳಿದ್ದಕ್ಕೆ ಜಗಳ ಆರಂಭವಾಗಿದೆ. ಅಜಯ್, ಮಂಜುನಾಥ ನ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಮಂಜುನಾಥ್‌ ಬಿದ್ದು ಒದ್ದಾಡಿದ್ದಾನೆ. ಸ್ಥಳದಿಂದ ಆರೋಪಿ ಅಜಯ್‌ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.