ಧಾರವಾಡ: ರಾಜ್ಯದಲ್ಲಿ 160 ಸಾಮಾನ್ಯ ವರ್ಗದ ಮತಕ್ಷೇತ್ರಗಳಿವೆ. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರ ಸಿಗದಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾಕೆ ಹೀಗೆ ಓಡಾಡುತ್ತಿದ್ದಾರೊ ಗೊತ್ತಿಲ್ಲ. ಒಮ್ಮೆ ಕೊಲಾರ್, ಒಮ್ಮೆ ಚಾಮರಾಜನಗರ ಮತ್ತೊಮ್ಮೆ ಚಾಮುಂಡೇಶ್ವರಿ, ಬೀಳಗಿ, ಬಾದಾಮಿ ಹೋಗುತ್ತಿದ್ದಾರೆ.
ಅವರು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಮುಂದಿನ ಸ್ವಯಂ ಘೋಷಿತ ಸಿಎಂ. ಅಂಥವರಿಗೆ ಒಂದು ಕ್ಷೇತ್ರ ಸಿಗುತ್ತಿಲ್ಲ ಎಂದರೆ ಕಾಂಗ್ರೆಸ್ ಯಾವ ಪರಿಸ್ಥಿತಿಗೆ ಬಂದಿದೆ ಊಹಿಸಿ.
ಇನ್ನು ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದಿರುವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ಸಿದ್ದರಾಮಯ್ಯ ಸೋಲುತ್ತಾರೆ ಎನ್ನುವ ಸತ್ಯವನ್ನು ಸಂತೋಷ ಲಾಡ್ ಅರಿತಿರಬೇಕು ಎಂದು ವ್ಯಂಗ್ಯವಾಡಿದರು.