ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸಹೋದರಿ ಹಾಗೂ ವೈಎಸ್ಆರ್ ಟಿಪಿ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶಾಸಕ ಹಾಗೂ ಭಾರತ ರಾಷ್ಟ್ರ ಸಮಿತಿ ನಾಯಕ ಶಂಕರ ನಾಯಕ ವಿರುದ್ಧ ಅನುಚಿತ ಹೇಳಿಕೆ ನೀಡಿರುವ ಆರೋಪದ ಮೇಲೆ ಶರ್ಮಿಳಾ ಅವರನ್ನು ಮೆಹಬೂಬಾದ್ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಶರ್ಮಿಳಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೆಹಬೂಬಾದ್ ಶಾಸಕರು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ನೀವು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದೀರಿ. ಅವುಗಳನ್ನು ಈಡೇರಿಸಿಲ್ಲ. ನಿಮ್ಮ ಭರವಸೆಗಳನ್ನು ಈಡೇರಿಸದಿದ್ದರೆ ನೀವು ಕೊಜ್ಜಾ ಎಂದು ಹೇಳಿದರು.

ಶರ್ಮಿಳಾ ಹೇಳಿಕೆ ಕುರಿತು ಶಾಸಕ ಶಂಕರ್ ನಾಯಕ ದೂರು ದಾಖಲಿಸಿದರು. ಶರ್ಮೀಳಾ ವಿರುದ್ಧ ಎಸ್ ಸಿ- ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶರ್ಮಿಳಾ ಅವರನ್ನು ಸದ್ಯ ಹೈದರಾಬಾದ್ ಗೆ ಸ್ಥಳಾಂತರಿಸಲಾಗಿದೆ.