ಬೆಂಗಳೂರು: ಹೃದಯಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ ಟಾಲಿವುಡ್ ನಟ ನಂದಮೂರಿ ತಾರಕ್ ರತ್ನ ಕೊನೆಯುಸಿರೆಳೆದಿದ್ದಾರೆ. ಕಳೆದ 2 ದಿನಗಳಿಂದ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು.

ಕಳೆದ 23 ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ ಹೃದಯಾಘಾತದ ಜೊತೆಗೆ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಶನಿವಾರ ಇಹಲೋಕ ತ್ಯಜಿಸಿದರು.

ಆಸ್ಪತ್ರೆಗೆ ಇಂದು ಬಾಲಕೃಷ್ಣ ಹಾಗೂ ‌ಕುಟುಂಬ ಸದಸ್ಯರು ಭೇಟಿ ನೀಡಿದರು. ತಾರಕರತ್ನ 20ನೇ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಾಯಕ ನಟನಾಗಿ ಯಶಸ್ಸು ಕಾಣಲಿಲ್ಲ. ಆನಂತರ ಹೆಚ್ಚಾಗಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ತಾರಕರತ್ನ ಅವರು ಪ್ರೇಮ ವಿವಾಹವಾಗಿದ್ದು, 2012ರಲ್ಲಿ ಅಲೇಖ್ಯಾ ರೆಡ್ಡಿ ಅವರನ್ನು ‌ವರಿಸಿದ್ದಾರೆ. ಒಂದೇ ಬಾರಿಗೆ 9 ಸಿನಿಮಾಗಳಲ್ಲಿ ನಟಿಸುವ ಮೂಲಕ ಎಂಟ್ರಿ ಕೊಟ್ಟು, ‌ಸಂಚಲನ ಸೃಷ್ಟಿ ಮಾಡಿದರು.