ಬೆನೋನಿ: ಅಂಡರ್-19 ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡ ಯುಎಇ ವಿರುದ್ದ ಭರ್ಜರಿ 122 ರನ್ ಗಳ ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ಶ್ವೇತಾ ಶೇರಾವತ್(74*) ಹಾಗೂ ಶೆಫಾಲಿ ವರ್ಮಾ(78) ಅವರ ಭರ್ಜರಿ ಬ್ಯಾಟಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿದೆ. ರಿಚಾ ಘೋಷ್(49) ಅರ್ಧಶತಕ ವಂಚಿತರಾದರು.
ಟಾರ್ಗೆಟ್ ಬೆನ್ನತ್ತಿದ್ದ ಯುಎಈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ಅಂಡರ್-19 ಪಂದ್ಯದಲ್ಲಿ ಇನ್ನೂರು ದಾಟಿದ ಮೊದಲ ತಂಡ ಎಂಬ ದಾಖಲೆ ಬರೆದುಕೊಂಡಿದೆ. ಶೆಫಾಲಿ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.