ಮುಂಬೈ: ವಿಶ್ವಸುಂದರಿ ಸುಶ್ಮೀತಾ ಸೇನ್ ಗೆ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿದೆ. ಈ‌ ಕುರಿತು ಸುಶ್ಮೀತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ’ (ನನ್ನ ತಂದೆ ಅವರ ಬುದ್ಧಿವಂತ ಮಾತುಗಳು) ನಾನು ಒಂದೆರಡು ದಿನಗಳ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದೆ.

ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ. ಹೃದ್ರೋಗ ತಜ್ಞರು ‘ನನಗೆ ದೊಡ್ಡ ಹೃದಯವಿದೆ’ ಎಂದು ಮರುದೃಢಪಡಿಸಿದರು ಎಂದು ಬರೆದುಕೊಂಡಿದ್ದಾರೆ.

ಸುಶ್ಮೀತಾ ಸೇನ್ ಅವರ ತಂದೆಯ ಜೊತೆಗಿನ ಚಿತ್ರವನ್ನು ಕೂಡ ಹಂಚಿಕೊಂಡಿದ್ದಾರೆ. ಸೌಂದರ್ಯ ಮತ್ತು ಸಾಮಾಜಿಕ ಕಾರ್ಯದಿಂದ ಹೆಸರುವಾಸಿ.

ಈ ಹಿಂದೊಮ್ಮೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. 2014ರಲ್ಲಿ ಸುಶ್ಮಿಕಾ ಅಡಿಸನ್‌ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದರಂತೆ ಸುಮಾರು ನಾಲ್ಕು ವರ್ಷಗಳ ಕಾಲ ಹೋರಾಡಿದ್ದಾರೆ.