ಮಂಡ್ಯ: ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಹೊನ್ನಪ್ಪ ವಯೋಸಹಜ ಕಾಯಿಲೆಯಿಂದ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.

1998 ರಲ್ಲಿ ಜೆಡಿಎಸ್ ನಿಂದ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಗೆ ಆಯ್ಕೆಯಾದರು. ಆನಂತರ ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮಂಡ್ಯ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದರು.

ಇಂದು ಸಂಜೆ 4 ಗಂಟೆಗೆ ಹುಟ್ಟೂರು ಇಂಡವಾಳ ಗ್ರಾಮದಲ್ಲಿ ‌ಮೃತರ ಅಂತ್ಯಕ್ರಿಯೆ ನೇರವೇರಲಿದೆ.