ಹೈದರಾಬಾದ್: ಕನ್ನಡದ ಖ್ಯಾತ ಬರಹಗಾರ, ಕವಿ, ವಿಮರ್ಶಕ ಹಾಗೂ ಭಾಷಾ ವಿಜ್ಞಾನಿ ಕೆ ವಿ ತಿರುಮಲ್ಲೇಶ್(82) ನಿಧನರಾದರು. ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು.
ಕೇರಳದ ಕಾಸರಗೋಡು ಮೂಲದವರಾದ ತಿರುಮಲ್ಲೇಶ್ ಅವರು ಹತ್ತಕ್ಕೂ ಹೆಚ್ಚು ಕವನ ಸಂಕಲನ, 4 ಕಥಾ ಸಂಕಲನ, 3 ಕಾದಂಬರಿಗಳು, 5 ವಿಮರ್ಶಾ ಕೃತಿಗಳು, 2 ನಾಟಕ, 5 ಕೃತಿಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಇವರ ಭಾಷಾ ಸೇವೆಗೆ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಸಂದಿದೆ.