ಬೆಂಗಳೂರು: ಐಪಿಎಲ್ ನ ಆರ್ ಸಿಬಿ ಟ್ವಿಟರ್ ಖಾತೆ ಶನಿವಾರ ಬೆಳಿಗ್ಗೆ ಹ್ಯಾಕ್ ಆಗಿದೆ. ಆರ್ ಸಿಬಿ ಅಧೀಕೃತ ಟ್ಟಿಟರ್ ಖಾತೆ ಹ್ಯಾಕ್ ಆಗಿದ್ದು, ಡಿಪಿ ಕೂಡ ಬದಲಾಗಿದೆ.
‘ಬೋರ್ ಅಪೆ ಯಾಚ್ ಕ್ಲಬ್’ ಎಂದು ಬದಲಾಯಿಸಿ ಎನ್ಎಫ್ ಟಿ ಸಂಭಂದಿಸಿದ ಟ್ಟಿಟ್ ಗಳನ್ನು ಹ್ಯಾಕರ್ ಗಳು ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರರು ಆರ್ ಸಿಬಿ ಖಾತೆ ಹ್ಯಾಕ್ ಆಗಿರುವುದನ್ನು ಗಮನಿಸಿದ್ದಾರೆ. ಖಾತೆ ಇಲ್ಲಿಯವರೆಗೂ ಸರಿ ಹೋಗಿಲ್ಲ.
ಹ್ಯಾಕರ್ಸ್ ಇಲ್ಲಿಯವರೆಗೂ ಆರ್ ಸಿಬಿ ಪ್ರೊಫೈಲ್ ನಿಂದ ಅನಗತ್ಯ ವಿಷಯವನ್ನು ತೆಗೆದು ಹಾಕಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಆರ್ ಸಿಬಿ ತನ್ನ ಖಾತೆಯನ್ನು ಹ್ಯಾಕ್ ಮಾಡುವಾಗ ಪ್ರಚಾರದ ವೀಡಿಯೊವನ್ನು ಪೋಸ್ಟ್ ಮಾಡಿದೆ.