ಕೊಲ್ಕತ್ತಾ: ಒಂದು ಪಂದ್ಯ ಬಾಕಿ ಇರುವಂತೆ ಭಾರತ ಏಕದಿನ ಸರಣಿ ಜಯಿಸಿದೆ. ಕೊಲ್ಕತ್ತಾ ಈಡನ್ ಗಾರ್ಡನ್ ನಲ್ಲಿ ನಡೆದ ದ್ವೀತಿಯ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.

ಕೆ ಎಲ್ ರಾಹುಲ್(64) ಅವರ ಜವಾಬ್ದಾರಿಯುತ ಆಟದಿಂದ ಭಾರತ ಗುರಿ ಮುಟ್ಟಿತು. ಭಾರತ 43.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ, ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿತು. ಲಂಕಾ 39.4 ಓವರ್ ಗಳಲ್ಲಿ 215 ರನ್ ಗಳಿಗೆ ಸರ್ವ ಪತನ ಕಂಡಿದೆ.

ಶ್ರೀಲಂಕಾ ಪರ ಫರ್ನಾಂಡೊ 50, ಕುಶಾಲ್ ಮೆಂಡಿಸ್ 34, ವಹಿಂದು ಹಸರಂಗ್ 21, ವೆಲಗ್ಳೆ 32 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ 3, ಉಮ್ರಾನ್ ಮಲಿಕ್ 2, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು.

ಟಾರ್ಗೆಟ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತ ಅನುಭವಿಸಿತು. 86 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ(36) ಅವರ ಉತ್ತಮ ಜೊತೆಯಾಟದಿಂದ ಭಾರತದ ಗೆಲುವು ಸಾಧಿಸಿದೆ.

ಇಂದಿನ ಪಂದ್ಯ ಕನ್ನಡಿಗ ರಾಹುಲ್ ಅವರಿಗೆ 50ನೇ ಪಂದ್ಯ. ಒಟ್ಟು 12 ಅರ್ಧಶತಕ ಹಾಗೂ 5 ಶತಕಗಳನ್ನು ದಾಖಲಿಸಿದ್ದಾರೆ.