ಚಾಮರಾಜನಗರ: ಜನ ದೇವರಿಗೆ ವಿವಿಧ ರೀತಿಯ ಹರಿಕೆಗಳನ್ನು ಸಲ್ಲಿಸುತ್ತಾರೆ. ತಮ್ಮ ಆಸೆ ಈಡೇರಿಕೆಗೆ ಬೇರೆ ಬೇರೆ ರೀತಿಯ ಕೋರಿಕೆಗಳನ್ನು‌ ಸಲ್ಲಿಸುತ್ತಾರೆ. ಕೆಲವರು‌ ವಿಚಿತ್ರ ರೀತಿಯಲ್ಲಿ ಕೇಳಿಕೊಳ್ಳುತ್ತಾರೆ. ಓರ್ವ ಯುವತಿ ತನ್ನ ಪ್ರಿಯತಮನ ಹೊರತು ಬೇರೆ ಯಾರು ತಾಳಿ ಕಟ್ಟಬಾರದು ಎಂದು ಕೇಳಿಕೊಂಡಿದ್ದಾಳೆ.

ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಿ ದೇವಸ್ಥಾನಕ್ಕೆ ಓರ್ವ ಯುವತಿ ಪ್ರಿಯತಮನಿಗಾಗಿ ಕೇಳಿಕೊಂಡಿದ್ದಾಳೆ. ದೇವರೆ ನನ್ನ ಮೂರ್ತಿನ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರು ತಾಳಿ ಕಟ್ಟಬಾರದು’ ಎಂದು ಬರೆದು ಹುಂಡಿಗೆ ಚೀಟಿ ಹಾಕಿದ್ದಾಳೆ.

ಇತ್ತೀಚಿಗೆ ಓರ್ವ ಯುವಕ ಹುಡಗಿ ಪೋಟೋ ಜೊತೆಗೆ ದೇವರೆ ಹುಡುಗಿಯನ್ನು ಕರುಣಿಸು ಎಂದು ಬರೆದು ಹಾಕಿದ್ದು ಸುದ್ದಿಯಾಗಿತ್ತು.