ಕೊಚ್ಚಿ: ಐಪಿಎಲ್ ಪ್ರಾಂಚೈಸಿಗಳು ಮಿನಿ ಹರಜಿನಲ್ಲಿ ಇಂಗ್ಲೆಂಡ್ ಆಟಗಾರರ ಮೇಲೆ‌ ಹಣದ ಹೊಳೆ ಹರಿಸಿದ್ದಾರೆ. ಪ್ರಾಂಚೈಸಿಗಳು ಆಂಗ್ಲ ಕ್ರಿಕೆಟರ್ ಮೇಲೆ‌ ಕಣ್ಣಿಟ್ಟು ಕೋಟಿ ಕೋಟಿ ಹಣ ನೀಡಿ ಖರೀದಿಸಿದ್ದಾರೆ. ಒಟ್ಟು 51.9 ಕೋಟಿ ರೂ. ವ್ಯಯ ಮಾಡಿದ್ದಾರೆ.

ಕೊಚ್ಚಿಯಲ್ಲಿ ಇಂದು ಮಿನಿ ಹರಾಜು ನಡಿದಿದೆ. ವಿದೇಶಿ ಆಟಗಾರರು ಕೋಟಿ ಲೆಕ್ಕದಲ್ಲಿ ಬಿಕರಿಯಾಗಿದ್ದಾರೆ. ಸ್ಯಾಮ್ ಕರ್ರನ್ ಪಂಜಾಬ್ ಕಿಂಗ್ಸ್ 18.50 ಕೋಟಿ ರೂ, ಕ್ಯಾಮೆರಾನ್ ಗ್ರೀನ್ ಮುಂಬೈ ಇಂಡಿಯನ್ಸ್ 17.50 ಕೋಟಿ ರೂ, ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂ, ನಿಕೋಲಸ್ ಪೂರನ್ ಲಕ್ನೋ ಸೂಪರ್ ಜೈಂಟ್ಸ್ 16 ಕೋಟಿ ರೂ. ಗೆ ಖರೀದಿಸಿದ್ದಾರೆ.

ಕನ್ನಡಿಗ ಮಯಾಂಕ್ ಅಗರವಾಲ್ ಸನ್ ರೈಸರ್ಸ್ ಹೈದ್ರಾಬಾದ್ 8.25 ಕೋಟಿ ರೂ, ಮನೀಷ್ ಪಾಂಡೆ ಡೆಲ್ಲಿ ಕ್ಯಾಪಿಟಲ್‌ 2.4 ಕೋಟಿ ರೂ ಗೆ ಹರಾಜಾಗಿದ್ದಾರೆ.

ಆರ್ ಸಿಬಿ ಈ ಬಾರಿ ಓರ್ವ ಕನ್ನಡಿಗನನ್ನು ತೆಗೆದುಕೊಂಡಿದೆ. ಯುವ ಕ್ರಿಕೆಟಿಗ ಮನೋಜ್ ಭಂಡಾಜೆ ಯನ್ನು ಖರೀದಿಸಿದೆ. ಆರ್ ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗ.