ದೊಡ್ಡಬಳ್ಳಾಪುರ: ಸೀನಿಮಯ ರೀತಿಯಲ್ಲಿ ಬ್ಯಾಂಕ್ ಕಳ್ಳತನ ಮಾಡಿದ ದರೋಡೆಕೋರರನ್ನು ಪೊಲೀಸ್ ರು ಬಂಧಿಸಿದ್ದಾರೆ.

ನವೆಂಬರ್ 25 ರಂದು ದೊಡ್ಡಬಳ್ಳಾಪುರ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ದರೋಡೆ ಮಾಡಿದ್ದರು.

ದರೋಡೆಕೋರರು ಉತ್ತರ ಪ್ರದೇಶದಿಂದ ಟ್ರಕ್ ನಲ್ಲಿ ಬಂದು ಸೀನಿಮಯ ರೀತಿಯಲ್ಲಿ 12 ಕೆಜಿ ಚಿನ್ನ, 15 ಲಕ್ಷ ರೂಪಾಯಿ ದೋಚಿಕೊಂಡು ಹೋಗಿದ್ದರು.

ಉತ್ತರ ಪ್ರದೇಶರ ಪೊಲೀಸ್ ರ ಸಹಕಾರದಿಂದ ಗುರುವಾರ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬದಾಯನ್ ಜಿಲ್ಲೆಯ ಅಲಾಪುರ್ ನಲ್ಲಿ ಬಂಧಿಸಿದ್ದಾರೆ. ಬಂಧಿತರು ಚಾಲಕ ಸರ್ತಾಜ್ ಹಾಗೂ ಕಾಳಿಚರಣ್.

ನ.25 ರಂದು ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್ ಲೂಟಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಿಂದ ಪೂರ್ವನಿಯೋಜಿತವಾಗಿ ಕಳ್ಳತನ, ಬ್ಯಾಂಕ್, ಮನೆಗಳ ಲೂಟಿ ಮಾಡಲು ಬೃಹತ್ ಟ್ರಕ್ ರೆಡಿ ಮಾಡಿಕೊಂಡಿದ್ದರು.

ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಕನ್ನ ಹಾಕಿದ್ದರು. ಗ್ಯಾಸ್ ಕಟರ್ ಮೂಲಕ ಶೆಟರ್ ಹಾಗೂ ಲಾಕರ್ ತೆರೆದು ಕಳ್ಳರು ಕೈಚಳಕ ತೋರಿದರು.

ಬ್ಯಾಂಕ್ ಬಳಿ ಚಲನವಲನಗಳನ್ನು ಗಮನಿಸಿ ಕಳುವು ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ‌ ಸೆರೆಯಾಗಿದ್ದ ಟ್ರಕ್ ಪತ್ತೆ ಹಚ್ಚಿ ಹೋದ ಪೊಲೀಸರಿಗೆ ಆರೋಪಿಗಳ ಮಹತ್ವದ ಸುಳಿವು‌ ಸಿಕ್ಕಿದೆ. ಅಲಾಪುರದ ಕಾಕರಾಲ ಪೊಲೀಸರ ನೆರವು ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.