ನವದೆಹಲಿ: ತಂಬಾಕು ಸೇವನೆಯಿಂದ ಜಗತ್ತಿನಾದ್ಯಂತ ಲಕ್ಷಾಂತರ ಜನ ಸಾವನಪ್ಪುತ್ತಾರೆ. ತಂಬಾಕಿನಿಂದ ಮಾರಕ ಕ್ಯಾನ್ಸರ್ ರೋಗಕ್ಕೂ ತುತ್ತಾಗುತ್ತಾರೆ. ದುಷ್ಪರಿಣಾಮಗಳ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸಲು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೂ, ಬೀಡಿ, ಸಿಗರೇಟ್, ಗುಟ್ಕಾ ಸೇವನೆ ಕಡಿಮೆ ಆಗಿಲ್ಲ.
ಆದರೆ ನ್ಯೂಜಿಲ್ಯಾಂಡ್ ದೇಶ ತಂಬಾಕು ಮುಕ್ತವಾಗುವತ್ತ ಹೆಜ್ಜೆ ಇರಿಸಿದೆ. ಹೊಸ ವರ್ಷದಂದು 2009 ರ ನಂತರ ಜನಿಸಿದ ಮಕ್ಕಳಿಗೆ ತಂಬಾಕು ಹಾಗೂ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ.
ಇಂತಹದೊಂದು ಮಹತ್ತರವಾದ ಮಸೂದೆಯನ್ನು ನ್ಯೂಜಿಲ್ಯಾಂಡ್ ಸಂಸತ್ತಿನಲ್ಲಿ ಅಂಗೀಕರಿಸಿದೆ. ಹೊಸ ಕಾಯ್ದೆಯ ಪ್ರಕಾರ 14 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದವರಿಗೆ ಜೀವನ ಪರ್ಯಂತ ಜೈಲು ಶಿಕ್ಷೆ ಅಥವಾ 95,910 ಡಾಲರ್ ದಂಡ. 2025 ರ ವೇಳೆಗೆ ಸಂಪೂರ್ಣವಾಗಿ ತಂಬಾಕು ಮುಕ್ತ ದೇಶವಾಗಲು ನ್ಯೂಜಿಲ್ಯಾಂಡ್ ಈ ತೀರ್ಮಾನ ಕೈಗೊಂಡಿದೆ.