ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅನುಚಿತ ವರ್ತನೆ ತೋರಿದ ಯುವಕನಿಗೆ ಗೂಸಾ ಬಿದ್ದಿದೆ.

ಚರ್ಚ್ ಸ್ಟ್ರೀಟ್ ಬಳಿ ಸಂಭ್ರಮಾಚರಣೆ ವೇಳೆ ಇಬ್ಬರ ಮಧ್ಯೆ ಮಾರಾಮಾರಿ ನಡೆದಿದೆ. ಓರ್ವ ಯುವಕ ತನ್ನ ಪ್ರಿಯತಮೆ ಜೊತೆಗೆ ಆಗಮಿಸಿದ. ಮತ್ತೋರ್ವ ಆ ಯುವತಿಯನ್ನು ಮೈಮುಟ್ಟಿ ಅನುಚಿತ ವರ್ತನೆ ತೋರಿದಕ್ಕೆ ಗೂಸಾ ನೀಡಿದ್ದಾನೆ.

ಸ್ಥಳದಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ಡಿಸಿಪಿ ಶ್ರೀನಿವಾಸ ಗೌಡ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ಹೊಸ ವರ್ಷದ ಸಂಧರ್ಭದಲ್ಲಿ ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ.