ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರ ಧರ್ಮಪತ್ನಿ ಅರುಣಾ ಲಕ್ಷ್ಮಿ ಅವರು ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಸ್ಪರ್ಧಿಯ ಕುರಿತು ಸ್ವತಃ ಜನಾರ್ಧನ್ ರೆಡ್ಡಿ ಘೋಷಣೆ ಮಾಡಿದರು. ಕೊಪ್ಪಳದ ಆನೆಗುಂದಿಗೆ ಭೇಟಿ ನೀಡಿದ ಬಳಿಕ ರೆಡ್ಡಿ ಮಾತನಾಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೇವಲ ಒಂದು ತಿಂಗಳ ಹಸುಗೂಸು. ಆದರೆ, ಈಗ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ ಸಿಗುತ್ತಿದೆ. ಹಗೆತನ ಸಾಧಿಸಲು ಪಕ್ಷ ಕಟ್ಟಿಲ್ಲ. ಕೇವಲ ಅಭಿವೃದ್ಧಿಗಾಗಿ ‌ಪಕ್ಷ ಸ್ಥಾಪಸಿರುವುದಾಗಿ ತಿಳಿಸಿದರು.