ಮುಂಬೈ: ನಟಿ ರಾಖಿ ಸಾವಂತ ಅವರನ್ನು ಮುಂಬೈನ ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ ಅವರ ದೂರಿನನ್ವಯ ರಾಖಿ ಬಂಧನವಾಗಿದೆ.
ರಾಖಿ ಬಂಧನದ ಕುರಿತು, ಸ್ವತಃ ಶೆರ್ಲಿನ್ ಚೋಪ್ರಾ ಟ್ವಿಟ್ ಮಾಡಿದ್ದಾರೆ. ಎಫ್ ಐಆರ್ 883/2022 ಕ್ಕೆ ಸಂಬಂಧಿಸಿದಂತೆ ರಾಖಿಯನ್ನು ಬಂಧಿಸಿದ್ದಾರೆ.
ಅದಿಲ್ ದುರಾನಿಯನ್ನು ಮದುವೆ ಆದಾಗಿನಿಂದ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ.
ಸಾಜಿಧ್ ಖಾನ್ ಮೇಲೆ ನಟಿ ಶೆರ್ಲಿನ್ ಮೀಟೂ ಆರೋಪ ಮಾಡಿದ್ದರು. ಆಮೇಲೆ ರಾಖಿ ಸಾವಂತ ಹಾಗೂ ಶೆರ್ಲಿನ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಇಬ್ಬರು ಕೂಡ ಮಾನನಷ್ಟ ಮೊಕ್ಕದಮ್ಮೆ ಕೇಸ್ ದಾಖಲಿಸಿದರು.