ಗದಗ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ ಸಂಬಂಧಿಸಿದಂತೆ ಕರಡು ಮತದಾರರ ಯಾದಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರರ ಕಚೇರಿಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ www.ceokarnataka.kar.nic.in ರಲ್ಲಿ ಪ್ರಕಟಿಸಲಾಗಿದೆ.

01-01-2024 ಕ್ಕೆ ಇರುವಂತೆ 18 ವರ್ಷ ವಯಸ್ಸು ಪೂರ್ಣಗೊಂಡಿರುವವರು ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ಈ ಅವಧಿಯಲ್ಲಿ ತಮ್ಮ ಹೆಸರುಗಳನ್ನು ನಮೂನೆ ನಂ. 6 ರಲ್ಲಿ ಸಲ್ಲಿಸಬಹುದು ಹಾಗೂ 2024 ನೇ ವರ್ಷದ ಅರ್ಹತಾ ದಿನಾಂಕಗಳಾದ 1ನೇ ಏಪ್ರಿಲ್, 2024, 1ನೇ ಜುಲೈ, 2024 ಅಥವಾ 1ನೇ ಅಕ್ಟೋಬರ್, 2024 ನೇದ್ದಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು, ಕರಡು ಮತದಾರ ಪಟ್ಟಿ ಪ್ರಕಟಣೆ ದಿನಾಂಕದಿಂದ ನಮೂನೆ 6 ರಲ್ಲಿ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇಂತಹ ಅರ್ಜಿಗಳನ್ನು ಆಯಾ ತ್ರೈಮಾಸಿಕಗಳಲ್ಲಿ ಅರ್ಹತೆಯನ್ನು ಪರಿಶೀಲಿಸಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುವುದು. ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಲು ನಮೂನೆ 6 ರಲ್ಲಿ ಅರ್ಜಿಸಲ್ಲಿಸುವ ಅರ್ಜಿದಾರನು ಅರ್ಜಿಗೆ ಇತ್ತೀಚಿನ ಪಾಸ್‍ಪೋರ್ಟ ಸೈಜ್ ಪೋಟೋ ಹಾಗೂ ವಿಳಾಸದ ಬಗ್ಗೆ ದಾಖಲೆಗಳು ಹಾಗೂ ವಯಸ್ಸಿನ ಬಗ್ಗೆ ದಾಖಲೆಗಳನ್ನು ನೀಡಲು ತಿಳಿಸಲಾಗಿದೆ.

ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು VHA Mobile App ಮುಖಾಂತರ ಅಥವಾ www.nvsp.in ರ ಮುಖಾಂತರ ಅಥವಾ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು BLO ), ಉಪವಿಭಾಗಾಧಿಕಾರಿಗಳ ಕಾರ್ಯಾಲಯ (ERO), ಸಂಬಂಧಪಟ್ಟ ತಹಶೀಲ್ದಾರರ ಕಾರ್ಯಾಲಯಗಳಲ್ಲಿ (AERO) ದಿನಾಂಕ: 27.10.2023 (ಶುಕ್ರವಾರ) ದಿಂದ 09.12.2023 (ಶನಿವಾರ) ದವರೆಗೆ ಸ್ವೀಕರಿಸಲಾಗುವುದು.

ಸದರಿ ದಿನಾಂಕಗಳಂದು ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 05.01.2024 ರಂದು ಅಂತಿಮ ಮತದಾರ ಪಟ್ಟಿಗಳನ್ನು ಪ್ರಕಟಿಸಲಾಗುವುದು.

ಜಿಲ್ಲೆಯಲ್ಲಿ ಒಟ್ಟು 4,38,062 ಪುರಷ ಮತದಾರರು, 4,36,835 ಮಹಿಳಾ ಮತದಾರರು ಹಾಗೂ 58 ಇತರೆ ಮತದಾರರು ಹೀಗೆ ಒಟ್ಟು 8,74,955 ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಇರುತ್ತಾರೆ. ಜಿಲ್ಲೆಯ ಒಟ್ಟು ಮತದಾರರ ಪೈಕಿ 24383 ಯುವ ಮತದಾರರು ಸೇರ್ಪಡೆಯಾಗಿರುತ್ತಾರೆ. ಈ ಪೈಕಿ 12859 ಪುರುಷ ಹಾಗೂ 11521 ಮಹಿಳಾ ಮತದಾರರಿರುತ್ತಾರೆ.

ಪ್ರಸ್ತುತ ಕರಡು ಮತದಾರ ಪಟ್ಟಿಯಲ್ಲಿ 11388 ವಿಶೇಷ ಚೇತನ ಮತದಾರರಿದ್ದು, ಈ ಪೈಕಿ 6734 ಪುರಷ ಹಾಗೂ 4654 ಮಹಿಳಾ ವಿಶೇಷ ಚೇತನ ಮತದಾರಿರುತ್ತಾರೆ. ಮತದಾರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪೂರ್ವಾವಧಿಯಲ್ಲಿ ಒಟ್ಟು 4037 ಮತದಾರರ ಹೆಸರನ್ನು ಕೈಬಿಡಲಾಗಿದೆ ಹಾಗೂ 11037 ಮತದಾರರ ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆ.