ಬೆಂಗಳೂರು: ಸಾಮಾನ್ಯ ಜನರ ಸೈಟ್ ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡುವುದು ಕೇಳಿದ್ದೀವಿ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಶಾಸಕರ ಸೈಟ್ ಅನ್ನೇ ಖದೀಮರು ಕಬಳಿಸಿದ ದಾಖಲೆ ಪ್ರಕರಣವಾಗಿದೆ.

2008 ರಲ್ಲಿ ಲೊಟ್ಟೆಗೊಲ್ಲಹಳ್ಳಿಯ ರಾಜಮಹಲ್ ವಿಲಾಸದ ಎರಡನೇ ಹಂತದಲ್ಲಿ 50×80 ಅಳತೆಯ ಜಿ ಕೆಟಗರಿ ನಿವೇಶನ ಮುಂಜೂರು ಮಾಡಲಾಗಿದೆ. ಶಾಸಕರಾದ ಅಭಯ್ ಪಾಟೀಲ್, ಗೂಳಿಹಟ್ಟಿ ಶೇಖರ್ ಮತ್ತು ಎಂ.ಪಿ ನರೇಂದ್ರಸ್ವಾಮಿ ಮೂವರಿಗೂ ನಿವೇಶನ ಹಂಚಿಕೆಯಾಗಿದೆ.

ಖದೀಮರು ನಕಲಿ ದಾಖಲೆ ಸೃಷ್ಟಿ ಮಾಡಿ, ಶಾಸಕರಿಗೆ ಹಂಚಿಕೆಯಾದ ಸೈಟ್ ಕಬಳಿಕೆ ಮಾಡಿದ್ದಾರೆ. ಈ ಕುರಿತು ಶಾಸಕ ಗೂಳಿಹಟ್ಟಿ ಶೇಖರ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹಲವರ ಮೇಲೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಯುತ್ತಿದೆ.