ಪರ್ಲ್: ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸನ್ ರೈಸರ್ಸ್ ಹೈದರಾಬಾದ್ ಒಡೆತನದ ಮಾಲಕಿ ಕಾವ್ಯಾ ಮಾರನ್ ಗೆ ವಿದೇಶಿ ನೆಲದಲ್ಲೂ ಮದುವೆ ಪ್ರಪೋಸಲ್ ಬಂದಿದೆ.

ಕಾವ್ಯ ಮಾರನ್ ಅವರು ಈ ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಿರುವ SA-20 ಲೀಗ್ ನಲ್ಲಿ ತಂಡ ಖರೀದಿಸಿದ್ದಾರೆ. ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ಎಂಬ ತಂಡ ಹೊಂದಿದ್ದಾರೆ.

ಗುರುವಾರ ಜನವರಿ 19 ರಂದು ಪಾರ್ಲ್ ರಾಯಲ್ಸ್ ತಂಡದ ವಿರುದ್ಧ ಸನ್‌ ರೈಸರ್ಸ್ ಈಸ್ಟರ್ನ್ ಕೇಪ್‌ ನ ಪಂದ್ಯದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿ ‘ಮದುವೆ ಪ್ರಸ್ತಾಪ’ ಮಾಡಿದರು.

ಐಪಿಎಲ್ ಹರಾಜು ಹಾಗೂ ಪಂದ್ಯದ ವೇಳೆ ಕಾವ್ಯಾ ಕಾಣಿಸಿಕೊಂಡು ‘ಮಿಸ್ಟರಿ ಗರ್ಲ್’ ಎಂದೇ ಖ್ಯಾತಿ ಹೊಂದಿದ್ದಾರೆ. ದೇಶ ವಿದೇಶದಲ್ಲಿ ಅವರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.