ವಿಜಯಪುರ: ಸಚಿವ ಮುರಗೇಶ್ ನಿರಾಣಿ ಶನಿವಾರ ಕಾರು ಚಾಲಕ ಆತ್ಮಹತ್ಯೆ ಹೇಳಿಕೆ ಹಿನ್ನಲೆಯಲ್ಲಿ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ ಸಿಎಂಗೆ ಪತ್ರ ಬರೆದಿದ್ದಾರೆ. ಯತ್ನಾಳ್ ಸಿಎಂಗೆ ಪತ್ರ ಬರೆದಿದ್ದು, ಸಿಬಿಐ ತನಿಖೆ ನಡೆಸುವಂತೆ ಕೋರಿದ್ದಾರೆ.
ಸಚಿವ ಸಂಪುಟದ ಸದಸ್ಯರು ಈ ರೀತಿ ಆರೋಪ ಮಾಡಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲಿ. ಈ ರೀತಿಯ ಆರೋಪದಿಂದ ಸರ್ಕಾರದ ಕುರಿತು ತಪ್ಪು ಸಂದೇಶ ಹೊಗುತ್ತದೆ. ದೇಶದ ಜನತೆಗೆ ಈ ಕುರಿತು ಸತ್ಯಾಸತ್ಯತೆ ತಿಳಿಯಬೇಕು. 24 ಗಂಟೆ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಬೇಕು. ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸಚಿವ ಮುರಗೇಶ್ ನಿರಾಣಿ ಶನಿವಾರ ವಿಜಯಪುರದಲ್ಲಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಯಾರು? ಏನು? ಎಂಬುದರ ಕುರಿತು ತನಿಖೆ ಆಗಬೇಕು ಎಂದು ಹೇಳಿದರು.