ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು 2014 ರಲ್ಲಿ ತಮ್ಮ ಅಂತಿಮ ವಿಧಿ ವಿಧಾನಗಳ ಬಗ್ಗೆ ವಿಲ್ ಬರೆದಿಟ್ಟಿದ್ದರು.
ನೈಸರ್ಗಿಕವಾಗಿ ಜನ್ಮ ತಾಳಿದ್ದು, ನೈಸರ್ಗಿಕವಾಗಿಯೇ ಪರಮಾತ್ಮನ ಪಾದ ಸೇರಬೇಕು. ನನ್ನ ಪಾರ್ಥಿವ ಶರೀರವನ್ನು ಹೂಳದೇ, ಅಗ್ನಿ ಸ್ಪರ್ಶ ಮಾಡಬೇಕು. ಚಿತಾ ಭಸ್ಮವನ್ನು ನದಿಗೆ ಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಮಂಗಳವಾರ ಸಂಜೆ ಜ್ಞಾನ ಯೋಗಾಶ್ರಮದಲ್ಲಿ ಸ್ವಾಮೀಜಿ ಅವರ ಇಚ್ಛೆಯಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ ಮಾಧ್ಯಮದವರಿಗೆ ಹೇಳಿದ್ದಾರೆ.
ಶ್ರೀಗಳ ಲಿಂಗೈಕ್ಯ ಸುದ್ದಿ ತಿಳಿಯುತ್ತಿದಂತೆ ಯೋಗಾಶ್ರಮದತ್ತ ಭಕ್ತ ಸಮೂಹ ಹರಿದು ಬರುತ್ತಿದೆ.