ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಕೆಇಎ ನಡೆಸಲಿದೆ.

ಇಲ್ಲಿ ತನಕ ಮೈಸೂರು ವಿಶ್ವವಿದ್ಯಾನಿಲಯ ಕೆ ಸೆಟ್ ಪರೀಕ್ಷೆ ನಡೆಸುತಿತ್ತು. ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ ಸೆಟ್ ನಡೆಸಲಿದೆ.

2021 ಜುಲೈ ನಲ್ಲಿ ಮೈಸೂರು ವಿವಿ ಕೆ ಸೆಟ್ ನಡೆಸಿತ್ತು. ಆಗ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನಲೆಯಲ್ಲಿ ಸರ್ಕಾರ ಕೆಇಎಗೆ ಪರೀಕ್ಷೆ ನಡೆಸಲು ಆದೇಶ ನೀಡಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಕೆಇಎ ಕೆ ಸೆಟ್ ನಡೆಸಲಿದೆ.