ಬೆಂಗಳೂರು: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ನವಂಬರ್ 2ರಂದು ತಾಯಿ ಕಾರ್ಡ್ ತಂದಿಲ್ಲ ಎನ್ನುವ ಕಾರಣಕ್ಕೆ ತ್ವರಿತ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿ ಮೃತಪಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ, ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಸಹಿತ ನಾಲ್ವರನ್ನು ಅಮಾನತುಗೊಳಿಸಿದೆ.
ತುಮಕೂರು ಜಿಲ್ಲಾ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಉಷಾ ಎ.ಎರ್., ನರ್ಸ್ ಯಶೋಧ ಬಿ ವೈ, ಸವಿತಾ, ದಿವ್ಯ ಭಾರತಿ ಅವರನ್ನ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ನ. 3ರಂದು ಆದೇಶ ಹೊರಡಿಸಿದ್ದಾರೆ.
ತುಂಬಿ ಗರ್ಭಿಣಿ ಚಿಕಿತ್ಸೆಗಾಗಿ ಬಂದ ಕೂಡಲೇ ಅವಶ್ಯಕತೆ ಇರುವ ತುರ್ತು ಚಿಕಿತ್ಸೆಯನ್ನು ನೀಡದೆ ಅವರನ್ನು ವಾಪಸ್ ಕಳುಹಿಸಿರುವುದು ಸಮಂಜಸವಲ್ಲ. ಪ್ರಸೂತಿ ಚಿಕಿತ್ಸಾ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಮತ್ತು ಶುಶ್ರೂಷಕರ ಬೇಜವಾಬ್ದಾರಿಯಿಂದ ತಾಯಿ ಮತ್ತು ಅವಳಿ ಮಕ್ಕಳು ಮೃತರಾಗಿರುವುದು ಅತ್ಯಂತ ಶೋಚನೀಯ. ಘಟನೆಯಲ್ಲಿ ವೈದ್ಯರು ಮತ್ತು ದಾದಿಯರ ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.