ಪೂಚೆಫ್​ಸ್ಟ್ರೂಮ್: ಚೊಚ್ಚಲ ಆವೃತ್ತಿಯ ಅಂಡರ್-19 ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿದಿದೆ.

ಟಾಸ್​ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂಗ್ಲೆಂಡ್ ತಂಡ 17.1 ಓವರ್​ಗಳಲ್ಲಿ 68 ರನ್​ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ ತಂಡ 14 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 69 ರನ್​ ಪೇರಿಸಿ ಆಗಿ ಹೊರಹೊಮ್ಮಿತು.

ಸರಣಿ ಆರಂಭದಿಂದಲೇ ಭಾರತ ಉತ್ತಮ ಲಯ ಕಾಯ್ದುಕೊಂಡು ಕಪ್ ಎತ್ತಿ ಹಿಡಿದಿದೆ.