ಅಹ್ಮದಾಬಾದ್: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿ ಕಳೆದ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಬಂಧನವಾಗಿದೆ.
ಗುಜರಾತ್ ನಲ್ಲಿ ಅಡಗಿ ಕುಳತಿದ್ದ ರವಿ ಯನ್ನು ಮೈಸೂರು ಪೊಲೀಸರು ಅಹ್ಮದಾಬಾದ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಎಸಿಪಿ ಎಂ. ಶಿವಕುಮಾರ್ ನೇತೃತ್ವದಲ್ಲಿ ಕೆ.ಎಸ್. ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನವಾಗಿದೆ.
ಸಚಿವ ಎಸ್ ಟಿ ಸೋಮಶೇಖರ್ ಜೊತೆ ಕಾಣಿಸಿಕೊಂಡ ನಂತರ ವಿವಾದಕ್ಕಿಡಾಗಿದ್ದರು. ಆನಂತರ ರವಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.
ಎರಡನೇ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ವಿವಿಧ ತಂಡಗಳನ್ನು ರಚಿಸಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.
ಎರಡನೇ ಪತ್ನಿ ಬಳಿಯಿದ್ದ ಲ್ಯಾಪ್ ಟಾಪ್ ಪಡೆಯಲು ಯತ್ನಿಸಿ ವಿಫಲವಾಗಿದ್ದ. ಆನಂತರ ಪತ್ನಿ ಹಾಗೂ ನಾದಿನಿ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆಯಲ್ಲಿ ದೂರು ದಾಖಲಿಸಿದ. ಅದು ಸುಳ್ಳು ಎಂದು ತಿಳಿದು, ಆನಂತರ ಪತ್ನಿ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ರವಿಯನ್ನು ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ. ಗುರುವಾರ ರವಿ ಕಾರ್ ಚಾಲಕ ಗಿರೀಶ್ ಬಂಧನವಾಗಿದೆ.