ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಬಳಿಕ, ಮೈಸೂರು ನಾಯಕರಾದ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ ನಾಗರಾಜ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶೀಘ್ರದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ‌ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರು ಭಾಗದಲ್ಲಿ ಬಿಜೆಪಿಗೆ ಈ‌ ಇಬ್ಬರ ನಾಯಕರ ರಾಜೀನಾಮೆಯಿಂದ ಹೊಡೆತ ಬೀಳುವುದು ಖಚಿತ. ಚುನಾವಣಾ ಸಮಯದಲ್ಲಿ ಮೈಸೂರು ಜಿಲ್ಲೆಯ ನಾಯಕರು ಕೈ ಕೊಟ್ಟಿರುವುದು ಕಮಲ ಪಾಳಯಕ್ಕೆ ಆಘಾತವಾಗಿದೆ.