ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು ಆಗಿದೆ. ಹೀರಾ ಬೆನ್ ಅವರನ್ನು ಇಂದು ಬೆಳಿಗ್ಗೆ ಅಹ್ಮದಾಬಾದ್ ನ ಯುನ್ ಮೆಹ್ತಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೀರಾ ಬೆನ್ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ತೀವ್ರ ನಿಗಾ ವಹಿಸಿದ್ದಾರೆ. ಆಸ್ಪತ್ರೆಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆ ವೈದ್ಯರೊಂದಿಗೆ ಪ್ರಧಾನಿ ಮೋದಿ ಕೂಡ ಸಂಪರ್ಕದಲ್ಲಿದ್ದಾರೆ.

ಹೀರಾ ಬೆನ್ ಶೀಘ್ರ ಚೇತರಿಕೆಗೆ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ. ‘ತಾಯಿ ಮಗನ ಪ್ರೀತಿ ಅಮೂಲ್ಯವಾದದ್ದು ಮೋದಿಜಿ, ಈ‌ ಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗೆ. ನಿಮ್ಮ ತಾಯಿ ಬೇಗ ಚೇತರಿಸಿಕೊಳ್ಳಲಿ ಎಂದು ಟ್ಟಿಟಿಸಿದ್ದಾರೆ.