ಮಂಡ್ಯ: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ಮಂಡ್ಯ ರೈತರು ಕೈ ಯಿಂದ ರಕ್ತ ಬಸಿದುಕೊಂಡು ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಸಿಎಂ ಪ್ರತಿಮೆಗೆ ರಕ್ತಾಭಿಷೇಕ ಮಾಡಿದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ 50 ದಿನಗಳಿಂದ ರೈತರು ಅಹೋರಾತ್ರಿ ಕಳೆದ 50 ದಿನದಿಂದ ಧರಣಿ ನಡೆಸುತ್ತಿದ್ದರು.

ರೈತರ ಸಮಸ್ಯೆಗಳನ್ನು ಆಲಿಸದೆ ಸರಕಾರದ ನಡೆಯನ್ನು ಖಂಡಿಸಿ ರೈತರು ಇವತ್ತು ವಿನೂತನವಾಗಿ ಪ್ರತಿಭಟಿಸುವ ನಿರ್ಧಾರ ಕೈಗೊಂಡು ಸಿಎಂ ಪ್ರತಿಮೆಗೆ ರಕ್ತಾಭಿಷೇಕ ಮಾಡಿದರು.

ಮಂಡ್ಯದ 30ಕ್ಕೂ ಹೆಚ್ಚು ರೈತರು ಇಂಜೆಕ್ಷನ್ ಟ್ಯೂಬ್ ಮೂಲಕ ರಕ್ತ ತೆಗೆದುಕೊಂಡು ಅಭಿಷೇಕ ಮಾಡಿದ್ದಾರೆ. ಪೊಲೀಸರು ರೈತರನ್ನು ಬಂಧಿಸಿದ್ದಾರೆ. ರಕ್ತಾಭಿಷೇಕ ಮಾಡಿದ ಪ್ರತಿಮೆಯನ್ನು ವಶಕ್ಕೆ ಪಡೆದಿದ್ದಾರೆ.