ಧಾರವಾಡ: ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಆರೋಪಿಗಳಿಬ್ಬರನ್ನು ಗುರುವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸಿಐಡಿ ಪೊಲೀಸರು‌ ಬಂಧಿಸಿರುವ ರುದ್ರಗೌಡ ಪಾಟೀಲ ಹಾಗೂ ಕಾಶೀನಾಥ ಅವರನ್ನು ಸ ಗುರುವಾರ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ವಿಚಾರಣೆ ಮುಂದೂಡಿದೆ.

ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅಕ್ರಮ ನೇಮಕಾತಿ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಈ ಇಬ್ಬರನ್ನು ವಶಕ್ಕೆ ಪಡೆದು, ಕಲಬುರ್ಗಿಯಿಂದ ಅವರನ್ನು ಕರೆತರಲಾಗಿತ್ತು.