ಮಂಡ್ಯ: ತಾಲೂಕಿನ ಹೊಡಾಘಟ್ಟ ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ವಕೀಲ ಮೃತಪಟ್ಟಿದ್ದಾರೆ.
ಮಂಡ್ಯ ನಗರದ ಕಾವೇರಿನಗರದಲ್ಲಿ ವಾಸವಿದ್ದ, ಮೂಲತಃ ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದ ನಿವಾಸಿ ಟಿ.ಕೆ.ನವೀನ್‌ಕುಮಾರ್(೪೦) ಮೃತ ಯುವ ವಕೀಲ. ಮಂಡ್ಯ ಮತ್ತು ರಾಮನಗರದಲ್ಲಿ ವಕೀಲಿಕೆ ವೃತ್ತಿಮಾಡುತ್ತಿದ್ದ ನವೀನ್‌ಕುಮಾರ್ ಅವರು ಮದ್ದೂರು ತಾಲೂಕು ಮರ‍್ನವಮಿದೊಡ್ಡಿ ಗ್ರಾಮದಲ್ಲಿನ ಸ್ನೇಹಿತರೊಬ್ಬರ ತಾಯಿಯ ತಿಥಿ ಕರ‍್ಯದಲ್ಲಿ ಭಾಗಿಯಾಗಿ ಮಂಡ್ಯಗೆ ವಾಪಾಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಬೆಸಗರಹಳ್ಳಿ ಮಾರ್ಗವಾಗಿ ಮೊಪೆಡ್‌ನಲ್ಲಿ ಮಂಡ್ಯಕ್ಕೆ ಬರುತ್ತಿದ್ದಾಗ ಹೊಡಾಘಟ್ಟ ಗ್ರಾಮದ ಬಳಿ ಎದುರಿನಿಂದ ಬದ ಟೆಂಪೋ ಟ್ರಾವಲರ್ ವಾಹನ ಡಿಕ್ಕಿಯಾಗಿದೆ. ತಲೆಗೆ ತೀವ್ರ ಪೆಟ್ಟು ಸ್ಥಳದಲ್ಲೇ ನವೀನ್‌ಕುಮಾರ್ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಸುಗಂಧಿನಿ ಪುತ್ರಿ ನೈನಿಕ ಇದ್ದಾರೆ. ಮೃತರ ಅಂತ್ಯಕ್ರಿಯೆಯುಸ್ವಗ್ರಾಮ ಮದ್ದೂರು ತಾಲೂಕಿನ ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಸೆ.೯ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.