ಕೊಪ್ಪಳ: ತುಂಗಭದ್ರಾ ಜಲಾಶಯದ ಮೇನ್ ಗೇಟ್ ಬಳಿ ಯುವಕ-ಯುವತಿ ಫೋಟೋ ಶೂಟ ಮಾಡಿಸಿಕೊಂಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
ನಿಷೇಧಿತ ಪ್ರದೇಶದಲ್ಲಿ ಈ ಯುವಕ-ಯುವತಿ ಫೋಟೋ ಶೂಟ್ ಹೇಗೆ…? ಮಾಡಿಸಿಕೊಂಡರು ಎನ್ನುವ ಪ್ರಶ್ನೆ ಉದ್ಬವವಾಗಿದೆ.


ಈಚೆಗೆ ಜಲಾಶಯದ ಟ್ರಸ್ಟ್ ಗೇಟ್ ಕಳಚಿದ ಪ್ರಕರಣದ ಬಳಿಕ ಜಲಾಶಯಕ್ಕೆ ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ವೀಕ್ಷಣೆ ಸಂದರ್ಭದಲ್ಲಿ ಫೋಟೋ ತೆಗೆಯಲು ಅವಕಾಶವಿದೆಯಾದರೂ ಮದುವೆಗೆ ಮುನ್ನ ನಿಶ್ಚಯವಾದ ಜೋಡಿಗಳ ಫೋಟೋ ಶೂಟ್ ಗೆ ಅವಕಾಶ ನೀಡಲಾಗಿಲ್ಲ.

ಇಷ್ಟಾದರೂ ಅಧಿಕಾರಿಗಳ ಕಣ್ತಪಿಸಿ, ಈ ಜೋಡಿ ಫೋಟೋ ಶೂಟ್ ಮಾಡಿಸಿಕೊಂಡಿತೇ…? ಇಲ್ಲವೇ ಕೆಲ ಅಧಿಕಾರಿಗಳ ಸಹಾಯದಿಂದಲೇ ಫೋಟೋ ಶೂಟ್ ಮಾಡಿಸಿಕೊಂಡಿತೆ…? ಎನ್ನುವ ಪ್ರಶ್ನೆ ಉದ್ಬವವಾಗಿದೆ.

ಈ ಯುವಕ-ಯುವತಿ ಯಾರು ಎನ್ನುವುದು ಗೊತ್ತಾಗಿಲ್ಲ. ಆದರೆ, ಫೋಟೋ ಮಾತ್ರ ಲಭ್ಯವಾಗಿದ್ದು, ತನಿಖೆಯಿಂದಲೇ ಈ ಜೋಡಿಯ ವಿವರ ಬಹಿರಂಗವಾಗಬೇಕಿದೆ.