ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ ಅವರದ್ದೆ ಎನ್ನಲಾಗುತ್ತಿರುವ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಅಮಿತ್ ಶಾ ಒಂಥರಾ ರೌಡಿ ಇದ್ದಂಗೆ, ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಜನಾಭಿಪ್ರಾಯ‌ ಸಿಗದಿದ್ದರು ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಮಾತುಗಳು ಸಂಚಲನ ಸೃಷ್ಟಿಸಿದೆ.

ಮುಂಬರುವ ಚುನಾವಣೆಯಲ್ಲಿ ನಮಗೆ ಜನಾದೇಶ ಬರುವುದಿಲ್ಲ. ಚುನಾವಣಾ ನಂತರ ಆಪರೇಷನ್ ಕಮಲ ಮಾಡುವುದಿಲ್ಲ. ಚುನಾವಣೆಗೂ ಮುನ್ನ ಆಪರೇಷನ್ ಮಾಡಲಾಗುತ್ತದೆ. ಹೊಂದಾಣಿಕೆ ರಾಜಕೀಯ ಬೇಡ ಎಂದು ಅಮಿತ ಶಾ ಹೇಳಿದ್ದಾರೆ. ಪಕ್ಷದ ವಿರುದ್ಧ ಮಾತನಾಡಿದರೆ ಕತೆ ಮುಗಿಯಿತು ಎಂದಿದ್ದಾರೆ.

ವೈರಲ್ ಆಗಿರುವ ಆಡಿಯೋ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕುರಿತು ಅನೇಕ ವಿಷಯಗಳ ಕುರಿತು ಈ  ಆಡಿಯೋದಲ್ಲಿ ಸ್ಪಷ್ಟವಾಗಿದೆ.

ಈ‌ ಆಡಿಯೋ ಕುರಿತು ಸ್ವತಃ ಯೋಗೇಶ್ವರ್ ಸ್ಪಷ್ಟನೆ‌ ನೀಡಿದ್ದಾರೆ. ಇದು ನಂದಲ್ಲ, ಯಾರೋ ಕಿಡಿಗೇಡಿಗಳು ಫೇಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.