ಗದಗ:  ಶ್ರೀರಾಮ ಸೇನಾ, ಭಜರಂಗದಳ, ದಲಿತ ಮಿತ್ರ ಬಳಗ ಹಾಗೂ ವಿವಿಧ ಹಿಂದೂ ಮತ್ತು ಕನ್ನಡ ಪರ ಸಂಘಟನೆಗಳು ಮೇ 15, 2025 ರಂದು ಗದಗ ಬಂದ್‌ಗೆ ಕರೆ ನೀಡಿವೆ.

ಸ್ಥಳೀಯ ವ್ಯಾಪಾರಸ್ಥರ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವ ತೋಂಟದಾರ್ಯ ಜಾತ್ರೆಯ ನೆಪದಲ್ಲಿ ತಿಂಗಳಾನುಗಟ್ಟಲೆ ಸ್ಥಾಪಿಸಲಾಗಿರುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಈ ಬಂದ್ ಕರೆ ನೀಡಲಾಗಿದೆ.

ಈ ಸಂಘಟನೆಗಳು ತಾತ್ಕಾಲಿಕ ಅಂಗಡಿಗಳಿಂದ ಸ್ಥಳೀಯ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿವೆ. ಅಲ್ಲದೆ, ಈ ಅಂಗಡಿಗಳು ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ ಎಂದು ತಿಳಿಸಿವೆ.

ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಸ್ಥಳೀಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಈ ಬಂದ್‌ಗೆ ಸಹಕರಿಸಬೇಕೆಂದು ರಾಜು ಖಾನಪ್ಪನವರ ತಿಳಿಸಿದ್ದಾರೆ.