ಹುಬ್ಬಳ್ಳಿ:  ಇಂದಿರಾ ಕ್ಯಾಂಟೀನ್ ಮುಚ್ಚಿದರೆ ಬಡವರಿಗೆ ದ್ರೋಹ ಮಾಡಿದಂತೆ. ತಮ್ಮ ಪ್ರಣಾಳಿಕೆಯಲ್ಲಿ 300 ಇಂದಿರಾ ಕ್ಯಾಂಟೀನ್ ಮಾಡುತ್ತೆವೆ ಎಂದವರು ಇವತ್ತು ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಡವರು ಮೆಚ್ಚಿಕೊಂಡಿದ್ದಾರೆ. ಆದರೆ ಬಿಜೆಪಿ ಸರಕಾರ ಯೋಜನೆಗೆ ಇಂದಿರಾ ಗಾಂಧಿ ಹೆಸರಿರುವ ಕಾರಣಕ್ಕೆ  ಅದನ್ನು ಮುಚ್ಚುವ ಕೆಲಸಕ್ಕೆ ಕೈಹಾಕಿದೆ ಎಂದರು.

ಇಂದಿರಾ ಕ್ಯಾಂಟೀನ್‌ಗಾಗಿ 1100 ಕೋಟಿ ರೂ. ಹಣ ಬಜೆಟ್‌‌ನಲ್ಲಿ ಮಿಸಲಿಡಲಾಗಿತ್ತು. ಆಗ ಆ ಯೋಜನೆ ಬಂದ್ ಮಾಡಲಾಗುತ್ತಿದೆ. ಬಡವರ ಹೊಟ್ಟೆಗೆ ಹೊಡೆಯುವ ಬಸವರಾಜ ಬೊಮ್ಮಾಯಿ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದರು.