ನವದೆಹಲಿ: ಜನವರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಲಿದೆ. ಈ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಆಟಗಾರ ಕೆ‌ಎಲ್ ರಾಹುಲ್‌ ಆಡುವುದು ಅನುಮಾನ ಎಂದು ವರದಿಯಾಗಿದೆ.

ಬಾಂಗ್ಲಾದೇಶ ವಿರುದ್ಧದ ದ್ವೀತಿಯ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಕೈಬೆರಳಿಗೆ ಗಾಯವಾಗಿದೆ. ಇನ್ನೂ ಚೇತರಿಕೆ ಆಗಿಲ್ಲ. ಕನ್ನಡಿಗ ಕೆ ಎಲ್ ರಾಹುಲ್ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

ಶ್ರೀಲಂಕಾ ತಂಡ ಜನವರಿ 3 ರಿಂದ 15ರವರೆಗೆ ಭಾರತ‌ ನೆಲದಲ್ಲಿ ಆಡಲಿದೆ. ಮೂರು T-20 ಹಾಗೂ ಮೂರು ಏಕದಿನ ಪಂದ್ಯಗಳನ್ನ ಆಡಲಿದೆ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರು ರನ್ ಬರ ಎದುರಿಸುತ್ತಿದ್ದಾರೆ.