ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ಮೇಲೆ‌ ಲೈಂಗಿಕ ಕಿರುಕಳ ಹೆಚ್ಚುತ್ತಿವೆ. ಈಗ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ಕಿರುಕಳ ನೀಡಿ ಶಿಕ್ಷಕ ಈಗ ಜೈಲು ಹಕ್ಕಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದಾರೆ. ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಸಂಕೇಶ್ವರ ಠಾಣಾ ಪೊಲೀಸ್ ರು ಶಿಕ್ಷಕನನ್ನು ಬಂಧಿಸಿದ್ದಾರೆ.

ಬಿ.ಆರ್ ಬಾಡಕರ್​ ಎಂಬ ಶಿಕ್ಷಕ ಹತ್ತನೇ ತರಗತಿ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ. ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ಡಿ.23 ರಂದು ದೂರು ದಾಖಲಿಸಿದರು.

ಈ ವಿಷಯವನ್ನು ಹೊರಗಡೆ ಹೇಳಿದರೆ, ಇಂಟರ್ನಲ್ ಅಂಕ ಕಡಿತಗೊಳಿಸುವ ಬೆದರಿಕೆ ಹಾಕಿದ್ದಾರೆ. ಆರೋಪಿ ಶಿಕ್ಷಕನ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ಅದೇ ಶಾಲೆಯ ಇನ್ನೋರ್ವ ಶಿಕ್ಷಕ ಕೆ.ಎಂ ಕೋಳಿ ಎಂಬುವರ ವಿರುದ್ಧ ಕೂಡ ದೂರು ನೀಡಲಾಗಿದೆ.